Kouzina: ದಕ್ಷಿಣ ಭಾರತದ ಪ್ರಸಿದ್ಧ ವಾಸುದೇವ್ ಅಡಿಗಾಸ್ ಬ್ರಾಂಡ್ ಈಗ ಕೌಜಿನಾ (Kouzina) ತೆಕ್ಕೆಗೆ
ಫುಡ್ ಟೆಕ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಕೌಜಿನಾ, ನ್ಯೂ ಸಿಲ್ಕ್ ರೂಟ್ ಪ್ರೈವೇಟ್ ಇಕ್ವಿಟಿಯಿಂದ ಐಕಾನಿಕ್ ಸೌತ್ ಇಂಡಿಯನ್ ರೆಸ್ಟೊರೆಂಟ್ ‘ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಈ ಸ್ವಾಧೀನದೊಂದಿಗೆ ಕೌಜಿನಾ ದಕ್ಷಿಣ ಭಾರತದಲ್ಲಿ ತ್ವರಿತ-ಸೇವಾ ರೆಸ್ಟೋರೆಂಟ್ (QSR) ವಿಭಾಗದಲ್ಲಿ ಮುಂಚೂಣಿ ಯಲ್ಲಿರುವ ವಾಸುದೇವ್ ಅಡಿಗಾಸ್ ಬ್ರ್ಯಾಂಡ್ ಅನ್ನು ಭಾರತದಾದ್ಯಂತ ವಿಸ್ತರಿಸಲು ಯೋಜಿಸಿದೆ.